ಈ ರೀಡ್ಮಿ ಕಡತದ ಇತ್ತೀಚಿನ ಅಪ್ಡೇಟ್ಗಳಿಗಾಗಿ, http://www.openoffice.org/welcome/readme.html ಅನ್ನು ನೋಡಿ
ಈ ಕಡತದಲ್ಲಿ ಈ ಪ್ರೊಗ್ರಾಂನ ಬಗೆಗಿನ ಪ್ರಮುಖ ಮಾಹಿತಿಗಳು ಇವೆ. ದಯವಿಟ್ಟು ಇದರೊಂದಿಗೆ ಕೆಲಸ ಮಾಡುವ ಮೊದಲು ಈ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ.
OpenOffice.org ಸಮುದಾಯವು, ಈ ಉತ್ಪನ್ನವು ವಿಕಸನೆ ಹೊಂದುವುದಕ್ಕೆ ಕಾರಣಕರ್ತವಾಗಿದೆ, ಹಾಗು ನಾವು ನಿಮ್ಮನ್ನು ಈ ಸಮುದಾಯದ ಒಂದು ಭಾಗವಾಗುವಂತೆ ಆಮಂತ್ರಿಸುತ್ತೇವೆ. ಒಬ್ಬ ಹೊಸ ಬಳಕೆದಾರರಾಗಿ, ನೆರವಿನ ಮಾಹಿತಿಗಾಗಿ OpenOffice.org ನ ತಾಣದಲ್ಲಿರುವ http://www.openoffice.org/about_us/introduction.html ಅನ್ನು ನೋಡಿ
ಈ ಕೆಳಗಿನ ವಿಭಾಗದಲ್ಲಿರುವ OpenOffice.org ಪರಿಯೋಜನೆಯಲ್ಲಿ ಪಾಲ್ಗೊಳ್ಳುವ ಬಗೆಗಿನ ಮಾಹಿತಿಯನ್ನೂ ಸಹ ಓದಿ.
OpenOffice.org ಅನ್ನು ಯಾರು ಬೇಕಿದ್ದರೂ ಉಚಿತವಾಗಿ ಬಳಸಬಹುದಾಗಿದೆ. ನೀವು OpenOffice.org ನ ಪ್ರತಿಯನ್ನು ಎಷ್ಟು ಗಣಕದಲ್ಲಿ ಬೇಕಿದ್ದರೂ ಅನುಸ್ಥಾಪಿಸಬಹುದು ಹಾಗು ಅದನ್ನು ಯಾವುದೆ ಕೆಲಸಗಳಿಗೆ (ವಾಣಿಜ್ಯ, ಸರ್ಕಾರಿ, ಸಾರ್ವಜನಿಕ ನಿರ್ವಹಣೆ ಹಾಗು ಶೈಕ್ಷಣಿಕ ಬಳಕೆ) ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ OpenOffice.org ನೊಂದಿಗೆ ನೀಡಲಾದ ಪರವಾನಗಿ ಮಾಹಿತಿಯನ್ನು ಅಥವ http://www.openoffice.org/license.html ಅನ್ನು ನೋಡಿ
OpenOffice.org ನ ಈ ಪ್ರತಿಯನ್ನು ನೀವು ಯಾವುದು ಹಣ ವ್ಯಯಿಸದೆ ಉಚಿತವಾಗಿ ಬಳಸಲು, OpenOffice.org ನ ಇವತ್ತಿನ ರೂಪವಾದ ಜಗತ್ತಿನಲ್ಲೆ ಮುಂಚೂಣಿಯಲ್ಲಿರುವ ಮುಕ್ತ-ಆಕರ ಆಫಿಸ್ ತಂತ್ರಾಂಶ ಎಂಬ ಹೆಸರನ್ನು ಪಡೆದಿರುವ, ಇದನ್ನು ವಿನ್ಯಾಸ ಮಾಡಲು, ವಿಕಸಿಸಲು, ಪರೀಕ್ಷಿಸಲು, ಅನುವಾದಿಸಲು, ದಸ್ತಾವೇಜು ಮಾಡಲು, ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲು ಹಾಗು ಇನ್ನೂ ಬಹಳ ರೀತಿಯಲ್ಲಿ ನೆರವಾದ ಎಲ್ಲರ ಪರಿಶ್ರಮದ ಫಲವೆ ಕಾರಣವಾಗಿದೆ.
ನೀವು ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತದೆ, ಹಾಗು OpenOffice.org ಭವಿಷ್ಯದಲ್ಲಿ ಹೀಗೆಯೆ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು, ದಯವಿಟ್ಟು ಪರಿಯೋಜನೆಯಲ್ಲಿ ಭಾಗಿಯಾಗಿ - ವಿವರಗಳಿಗಾಗಿ http://contributing.openoffice.org ಅನ್ನು ನೋಡಿ. ಪ್ರತಿಯೊಬ್ಬರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಕೈಜೋಡಿಸಬಹುದು.
ಲಿನಕ್ಸ್ ಕರ್ನಲ್ ಆವೃತ್ತಿ ೨.೬.೧೮ ಅಥವ ನಂತರದ್ದು
glibc2 ಆವೃತ್ತಿ ೨.೫ ಅಥವ ನಂತರದ್ದು
gtk ಆವೃತ್ತಿ ೨.೧೦.೪ ಅಥವ ನಂತರದ್ದು
ಪೆಂಟಿಯಮ್ಗೆ ಸರಿಹೊಂದಬಲ್ಲ PC (ಪೆಂಟಿಯಮ್ III ಅಥವ ಆತ್ಲಾನ್ ಅನ್ನು ಸಲಹೆ ಮಾಡಲಾಗುತ್ತದೆ)
೨೫೬ ಎಮ್ಬಿ RAM (೫೧೨ ಎಮ್ಬಿ RAM ಅನ್ನು ಸಲಹೆ ಮಾಡಲಾಗುತ್ತದೆ)
೧.೫೫ ಜಿ.ಬಿಯಷ್ಟು ಲಭ್ಯವಿರುವ ಡಿಸ್ಕ್ ಜಾಗ
೧೦೨೪ x ೭೬೮ ರೆಸಲ್ಯೂಶನ್ ಅನ್ನು ಹೊಂದಿರುವ X ಪರಿಚಾರಕ (ಇದಕ್ಕೂ ಹೆಚ್ಚಿನ ರೆಸಲ್ಯೂಶನ್ಗೆ ಸಲಹೆ ಮಾಡಲಾಗುತ್ತದೆ), ಕನಿಷ್ಟ ೨೫೬ ವರ್ಣಗಳೊಂದಿಗೆ
ವಿಂಡೊ ವ್ಯವಸ್ಥಾಪಕ
gail 1.8.6 ಹಾಗು at-spi 1.7 ಪ್ಯಾಕೇಜ್ಗಳನ್ನು ಹೊಂದಿರುವ Gnome 2.16 ಅಥವ ಮುಂದಿನದು, ಅಸಿಸ್ಟೀವ್ ಟೆಕ್ನಾಲಜಿ ಉಪಕರಣಗಳಿಗೆ (AT ಉಪಕರಣಗಳು) ಅಗತ್ಯವಾಗಿದೆ
ಲಿನಕ್ಸ್ ವಿತರಣೆಯಲ್ಲಿ ವಿವಿಧ ಪ್ರಕಾರಗಳು, ಹಾಗು ಒಂದೇ ಬಗೆಯ ವಿತರಣೆಯಲ್ಲಿ ವಿವಿಧ ಬಗೆಯ ಅನುಸ್ಥಾಪನಾ ಆಯ್ಕೆಗಳು ಲಭ್ಯವಿವೆ(KDE vs Gnome, ಇತರೆ). ಕೆಲವು ವಿತರಣೆಗಳು ತಮ್ಮದೆ ಆದಂತಹ ‘ಸ್ಥಳೀಯ’ OpenOffice.org ಆವೃತ್ತಿಯನ್ನು ಒದಗಿಸುವ ಸಾಧ್ಯತೆ ಇದೆ ಹಾಗು ಇದು ಈ ಸಮುದಾಯದ OpenOffice.org ನಲ್ಲಿರುವಂತಹ ಸವಲತ್ತಿಗಿಂತ ಭಿನ್ನವಾದ ಸವಲತ್ತುಗಳನ್ನು ಹೊಂದಿರಬಹುದು. ಕೆಲವೊಮ್ಮೆ ಸಮುದಾಯದ OpenOffice.org ಅನ್ನು‘ಸ್ಥಳೀಯ’ ಆವೃತ್ತಿಯೆ ಜೊತೆಗೆ ಅನುಸ್ಥಾಪಿಸಬಹುದಾಗಿದ. ಆದರೆ, ಈ ಸಮುದಾಯದ ಆವೃತ್ತಿಯನ್ನು ಅನುಸ್ಥಾಪಿಸುವ ಮೊದಲು ‘ಸ್ಥಳೀಯ’ ಆವೃತ್ತಿಯನ್ನು ತೆಗೆದು ಹಾಕುವುದು ಒಳಿತು. ಇದನ್ನು ಹೇಗೆ ನಿಭಾಯಿಸಬೇಕು ಎಂದು ಅರಿಯಲು ನಿಮ್ಮಲ್ಲಿನ ವಿತರಣೆಗೆ ಸಂಬಂಧಪಟ್ಟ ದಸ್ತಾವೇಜನ್ನು ನೋಡಿ.
ತಂತ್ರಾಂಶವನ್ನು ತೆಗೆದು ಹಾಕುವಾಗ ಅಥವ ಅನುಸ್ಥಾಪಿಸುವಾಗ ನಿಮ್ಮ ಗಣಕದಲ್ಲಿನ ಕಡತಗಳ ಒಂದು ಪ್ರತಿಯನ್ನು ಬೇರೆಲ್ಲಿಯಾದರೂ ಇರಿಸಿಕೊಳ್ಳಲು ಸಲಹೆ ಮಾಡಲಾಗುತ್ತದೆ.
ನಿಮ್ಮ ಗಣಕದ ತಾತ್ಕಾಲಿಕ ಕೋಶದಲ್ಲಿ ಸಾಕಷ್ಟು ಮುಕ್ತ ಮೆಮೊರಿ ಇದೆ ಹಾಗು ಆ ಕೋಶದಲ್ಲಿನ ವಿಷಯಗಳನ್ನು ಓದುವ, ಬರೆಯುವ ಹಾಗು ಚಲಾಯಿಸುವ ಅಧಿಕಾರವು ನಿಮಗೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅನುಸ್ಥಾಪನೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ಪ್ರೊಗ್ರಾಮ್ಗಳನ್ನು ಮುಚ್ಚಿ.
Berkeley ದತ್ತಸಂಚಯ ಎಂಜಿನ್ ಅನ್ನು OpenOffice.org ನ ಈ ಆವೃತ್ತಿಯಲ್ಲಿ ನವೀಕರಿಸಲಾಗಿದೆ. ನೀವು ನಿಮ್ಮಲ್ಲಿರುವ OpenOffice.org ನ ಆವೃತ್ತಿಯನ್ನು ಕೆಳಕ್ಕೆ ಇಳಿಸಿದಲ್ಲಿ ದತ್ತಸಂಚಯ ಎಂಜಿನ್ ನವೀಕರಣವು OpenOffice.org 3.2 ಕ್ಕೂ ಮೊದಲಿನ ಆವೃತ್ತಿಗಾಗಿ ಅನುಸ್ಥಾಪಿಸಲಾದ ಬಳಕೆದಾರ ದತ್ತಾಂಶದೊಂದಿಗೆ ಹೊಂದಿಕೊಳ್ಳದೆ ಇರಬಹುದು ಹಾಗು ಇದಕ್ಕಾಗಿ ನಿಮ್ಮ ನೆರವು ಬೇಕಾಗಬಹುದು.
OpenOffice.org ನ ಈ ಆವೃತ್ತಿಯು ವಿಸ್ತರಣೆಗಳನ್ನು ಅನುಸ್ಥಾಪಿಸಿದಾಗ ಹಾಗು ತೆಗೆದುಹಾಕಿದಾಗ ನಿಮ್ಮ ವಿಸ್ತರಣಾ ದತ್ತಸಂಚಯವನ್ನು ಹೊಸ Berkeley ದತ್ತಸಂಚಯ ರಚನೆಗೆ ಬದಲಾಯಿಸುತ್ತದೆ. ಈ ಪರಿವರ್ತನೆಯ ನಂತರ, ದತ್ತಸಂಚಯವನ್ನು OpenOffice.org ಈ ಹಿಂದಿನ ಆವೃತ್ತಿಗಳಿಂದ ಓದಲು ಸಾಧ್ಯವಿರುವುದಿಲ್ಲ. ಹಿಂದಿನ ಆವೃತ್ತಿಗೆ ಇಳಿಸುವುದರಿಂದ, ಅನುಸ್ಥಾಪನೆಯು ಅಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಕಾರಣವಾಗಬಹುದು.
ನೀವು OpenOffice.org ಅನ್ನು ಒಂದು ಹಿಂದಿನ ಆವೃತ್ತಿಗೆ ಇಳಿಸಿದಲ್ಲಿ, ಬಳಕೆದಾರ ದತ್ತಾಂಶವನ್ನು ಕೋಶವಾದ {user data}/uno_packages ತೆಗೆದುಹಾಕಬೇಕು, ಉದಾಹರಣೆಗೆ ~/.openoffice.org/3/user/uno_packages ಅನ್ನು, ಹಾಗು ಎಲ್ಲಾ ವಿಸ್ತರಣೆಗಳನ್ನು ಮರಳಿ ಅನುಸ್ಥಾಪಿಸಬೇಕು.
OpenOffice.org ಅನ್ನು ಸಿದ್ಧಗೊಳಿಸುವಾಗ ಏನಾದರೂ ತೊಂದರೆಗಳನ್ನು ಎದುರಿಸಿದರೆ (ಹೆಚ್ಚಿನ ಸಂದರ್ಭದಲ್ಲಿ ಗ್ನೋಮ್ ಅನ್ನು ಬಳಸುವಾಗ) ದಯವಿಟ್ಟು ಶೆಲ್ನ ಒಳಗೆ OpenOffice.org ಅನ್ನು ಆರಂಭಿಸಲು ನೀವು ಬಳಸುವ SESSION_MANAGER ಪರಿಸರದ ಚರಮೌಲ್ಯವನ್ನು ಬದಲಾಯಿಸಿ. ಹೀಗೆ ಮಾಡಲು "[office folder]/program" ನಲ್ಲಿ ಇರುವ soffice ಶೆಲ್ ಸ್ಕ್ರಿಪ್ಟಿನ ಆರಂಭದಲ್ಲಿ "unset SESSION_MANAGER" ಅನ್ನು ಸೇರಿಸಿ.
OpenOffice.org ಅನ್ನು ಆರಂಭಿಸುವಲ್ಲಿನ ಹಾಗು ತೆರೆ ಪ್ರದರ್ಶಕದಲ್ಲಿ ತೊಂದರೆಗಳಿಗೆ ಸಾಮಾನ್ಯವಾಗಿ (ಉದಾ. ಅನ್ವಯವು ಸ್ಥಬ್ದಗೊಳ್ಳುವುದು) ಗ್ರಾಫಿಕ್ ಕಾರ್ಡಿನ ಚಾಲಕವು ಕಾರಣವಾಗಿರುತ್ತದೆ. ಇಂತಹ ಸಮಸ್ಯೆಗಳು ಎದುರಾದಲ್ಲಿ, ದಯವಿಟ್ಟು ನಿಮ್ಮ ಗ್ರಾಫಿಕ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಿ ಅಥವ ನಿಮ್ಮ ಕಾರ್ಯವ್ಯವಸ್ಥೆಯೊಂದಿಗೆ ನೀಡಲಾದ ಗ್ರಾಫಿಕ್ ಕಾರ್ಡನ್ನು ಬಳಸಿನೋಡಿ. ಮೂರು ಆಯಾಮದ ವಸ್ತುಗಳನ್ನು ತೋರಿಸುವಲ್ಲಿ ಕಂಡುಬರುವ ತೊಂದರೆಯನ್ನು ಪರಿಹರಿಸಲು ಸಾಮಾನ್ಯವಾಗಿ 'ಉಪಕರಣಗಳು - ಆಯ್ಕೆಗಳು - OpenOffice.org - ನೋಟ - 3D (ಮೂರು ಆಯಾಮ) ನೋಟ'ದಲ್ಲಿನ "OpenGL ಅನ್ನು ಬಳಸು" ಅನ್ನು ನಿಷ್ಕ್ರಿಯಗೊಳಿಸಬೇಕು.
ಕೇವಲ ಕಾರ್ಯವ್ಯವಸ್ಥೆಯಿಂದ ಬಳಸದೆ ಇರುವ ಸಮೀಪಮಾರ್ಗ ಕೀಲಿಗಳನ್ನು (ಕೀಲಿ ಸಿದ್ಧತೆಗಳು) ಮಾತ್ರವೆ OpenOffice.org ನಲ್ಲಿ ಬಳಸಬಹುದಾಗಿದೆ. ಎಲ್ಲಿಯಾದರೂ OpenOffice.org ನಲ್ಲಿನ ಒಂದು ಕೀಲಿ ಸಿದ್ಧತೆಯು OpenOffice.org ಸಹಾಯದಲ್ಲಿ ವಿವರಿಸಿದಂತೆ ಕೆಲಸ ಮಾಡದೆ ಹೋದಲ್ಲಿ, ಆ ಸಮೀಪಮಾರ್ಗವನ್ನು ನಿಮ್ಮ ಕಾರ್ಯ ವ್ಯವಸ್ಥೆಯಲ್ಲಿ ಬಳಸಲಾಗಿದೆಯೆ ಎಂದು ಪರಿಶೀಲಿಸಿ. ಈ ಸಂದಿಗ್ದತೆಯನ್ನು ಪರಿಹರಿಸಲು ನಿಮ್ಮ ಕಾರ್ಯ ವ್ಯವಸ್ಥೆಗೆ ನಿಯೋಜಿಸಲಾದ ಕೀಲಿಗಳನ್ನು ಬದಲಾಯಿಸಬಹುದಾಗಿದೆ. ಇಲ್ಲವೆ ಇದಕ್ಕೆ ಬದಲಾಗಿ, OpenOffice.org ಗೆ ನಿಯೋಜಿಸಲಾದ ಯಾವ ಕೀಲಯನ್ನಾದರೂ ಸಹ ಬದಲಾಯಿಸಬಹುದಾಗಿದೆ. ಇದರೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, OpenOffice.org ಸಹಾಯವನ್ನು ಅಥವ ನಿಮ್ಮ ಕಾರ್ಯವ್ಯವಸ್ಥೆಯ ಸಹಾಯ ದಸ್ತಾವೇಜನ್ನು ನೋಡಿ.
OpenOffice.org ರಲ್ಲಿ ಪೂರ್ವನಿಯೋಜಿತವಾಗಿ ಕಡತವನ್ನು ಲಾಕ್ ಮಾಡುವುದನ್ನು ಶಕ್ತಗೊಳಿಸಿಲಾಗಿರುತ್ತದೆ. Network File System ಪ್ರೊಟೊಕಾಲ್ (NFS) ಅನ್ನು ಬಳಸುವ ಒಂದು ಜಾಲಬಂಧದಲ್ಲಿ, NFS ಕ್ಲೈಂಟ್ಗಳಿಗಾಗಿನ ಲಾಕ್ ಮಾಡುವ ಡೀಮನ್ ಸಕ್ರಿಯವಾಗಿರಬೇಕು. ಕಡತವನ್ನು ಲಾಕ್ ಮಾಡುವುದನ್ನು ಅಶಕ್ತಗೊಳಿಸಲು, soffice ಸ್ಕ್ರಿಪ್ಟನ್ನು ಸಂಪಾದಿಸಬೇಕು ಹಾಗು "export SAL_ENABLE_FILE_LOCKING" ಎಂಬ ಸಾಲನ್ನು "# export SAL_ENABLE_FILE_LOCKING" ಎಂಬುದಕ್ಕೆ ಬದಲಾಯಿಸಬೇಕು. ಕಡತ ಲಾಕ್ ಮಾಡುವುದನ್ನು ಅಶಕ್ತಗೊಳಿಸಿದಲ್ಲಿ, ಒಂದು ದಸ್ತಾವೇಜನ್ನು ಮೊದಲು ತೆರೆಯುವವರಿಗೆ ಮಾತ್ರವೆ ಆಗುವಂತೆ ಬರೆಯುವ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿರುವುದಿಲ್ಲ.
ಎಚ್ಚರಿಕೆ: ಸಕ್ರಿಯಗೊಳಿಸಲಾದ ಕಡತ ಲಾಕಿಂಗ್ ಸವಲತ್ತು ಲಿನಕ್ಸ್ NFS ೨.೦ ಯೊಂದಿಗೆ ಸೊಲಾರಿಸ್ ೨.೫.೧ ಹಾಗು ೨.೭ ಅನ್ನು ಬಳಸಿದಾಗ ತೊಂದರೆ ನೀಡುವ ಸಾಧ್ಯತೆ ಇದೆ. ನಿಮ್ಮ ಗಣಕ ಪರಿಸರದಲ್ಲಿ ಈ ನಿಯತಾಂಕಗಳು ಇದ್ದಲ್ಲಿ, ನೀವು ಈ ಲಾಕಿಂಗ್ ಸವಲತ್ತನ್ನು ತಪ್ಪಿಸುವಂತೆ ನಾವು ಬಲವಾಗಿ ಸಲಹೆ ಮಾಡುತ್ತೇವೆ. ಇಲ್ಲದೆ ಹೋದಲ್ಲಿ, ನೀವು ಒಂದು ಲಿನಕ್ಸ್ ಗಣಕದಿಂದ NFS ಆರೋಹಿತ ಕೋಶದ ಮುಖಾಂತರ ಒಂದು ಕಡತವನ್ನು ತೆಗೆಯಲು ಪ್ರಯತ್ನಿಸಿದಾಗ OpenOffice.org ಸ್ಥಬ್ದಗೊಳ್ಳುತ್ತದೆ.
OpenOffice.org ನಲ್ಲಿನ ನಿಲುಕಣೆ ಸವಲತ್ತುಗಳಿಗಾಗಿನ ಹೆಚ್ಚಿನ ಮಾಹಿತಿಗಾಗಿ, http://www.openoffice.org/access/ ಅನ್ನು ನೋಡಿ
ತಂತ್ರಾಂಶವನ್ನು ಅನುಸ್ಥಾಪಿಸಿದ ನಂತರ ದಯವಿಟ್ಟು ಉತ್ಪನ್ನ ನೋಂದಣಿಯ ಕನಿಷ್ಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಕೊಂಚ ಸಮಯವನ್ನು ವ್ಯಯಿಸಿ. ನೋಂದಣಿಯು ಐಚ್ಛಿಕವಾಗಿದ್ದರೂ ಸಹ ನೀವು ನೋಂದಣಿ ಮಾಡುವಂತೆ ನಾವು ಸಲಹೆ ಮಾಡುತ್ತೇವೆ, ಏಕೆಂದರೆ ಈ ಮೂಲಕ ಸಮುದಾಯ ತಂತ್ರಾಂಶವನ್ನು ಇನ್ನೂ ಉತ್ತಮಪಡಿಸಬಹುದು ಹಾಗು ಬಳಕೆದಾರರ ಅಗತ್ಯಗಳನ್ನು ನೇರವಾಗಿ ಪರಿಹರಿಸಬಹುದಾಗಿದೆ. ಗೌಪ್ಯತಾ ನಿಯಮದ ಮೂಲಕ OpenOffice.org ಸಮುದಾಯವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲು ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಅನುಸ್ಥಾಪನೆಯ ವೇಳೆಯಲ್ಲ ನೀವು ನೋಂದಣಿಯನ್ನು ಪೂರೈಸದೆ ಹೋಗಿದ್ದರೆ, ಮುಖ್ಯ ಪರಿವಿಡಿಯಲ್ಲಿನ "ಸಹಾಯ - ನೋಂದಣಿ" ಅನ್ನು ಬಳಸಿಕೊಂಡು ನೀವು ನೋಂದಣಿ ಪ್ರಕ್ರಿಯೆಯನ್ನು ಪೂರೈಸಬಹುದಾಗಿದೆ.
ಅಂತರ್ಜಾಲದಲ್ಲಿ ಒಂದು ಬಳಕೆದಾರ ಸಮೀಕ್ಷೆಯು ಲಭ್ಯವಿದೆ ಹಾಗು ಅದರಲ್ಲಿ ಪಾಲ್ಗೊಳ್ಳುವಂತೆ ನಾವು ಸಲಹೆ ಮಾಡುತ್ತೇವೆ. ಬಳಕೆದಾರ ಸಮೀಕ್ಷೆಯಿಂದ OpenOffice.org ಅನ್ನು ಮುಂದಿನ ಪೀಳಿಗೆಯ ಆಫೀಸ್ ಸೂಟ್ಗಾಗಿನ ವೇಗವಾಗಿ ಹೊಸ ಮಾನಕಗಳನ್ನು ಸಿದ್ಧಪಡಿಸಲು ಸಹಾಯವಾಗುತ್ತದೆ. ಗೌಪ್ಯತಾ ನಿಯಮದ ಮೂಲಕ OpenOffice.org ಸಮುದಾಯವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲು ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ.
http://support.openoffice.org/ ನಲ್ಲಿನ ಮುಖ್ಯ ಬೆಂಬಲ ಪುಟದಲ್ಲಿ OpenOffice.org ಗಾಗಿನ ಹಲವಾರು ರೀತಿಯ ನೆರವನ್ನು ಒದಗಿಸುತ್ತದೆ. ನಿಮ್ಮ ಪ್ರಶ್ನೆಗೆ ಈಗಾಗಲೆ ಉತ್ತರಿಸಿರಬಹುದು - http://user.services.openoffice.org ಅಥವ ಸಮುದಾಯ ವೇದಿಕೆಯನ್ನು ನೋಡಿ ಅಥವ http://www.openoffice.org/mail_list.html ನಲ್ಲಿನ 'users@openoffice.org' ನಲ್ಲಿನ ಆರ್ಕೈವ್ ಅನ್ನು ಹುಡುಕಿ. ಪರ್ಯಾಯವಾಗಿ, ನಿಮ್ಮ ಪ್ರಶ್ನೆಯನ್ನು users@openoffice.org ಗೆ ಕಳುಹಿಸಬಹುದು. ಲಿಸ್ಟಿಗೆ ಹೇಗೆ ಸೇರ್ಪಡೆಗೊಳ್ಳಬಹುದು (ಇಮೈಲ್ನಲ್ಲಿ ಪ್ರತ್ಯುತ್ತರವನ್ನು ಪಡೆಯಲು) ಎಂಬುದನ್ನು ಈ ಪುಟದಲ್ಲಿ ವಿವರಿಸಲಾಗಿದೆ: http://wiki.services.openoffice.org/wiki/Website/Content/help/mailinglists.
Za podršku unutar zajednice OpenOffice.org korisnika u Srbiji posetite http://sr.openoffice.org/podrska.html . Dopisna lista na srpskom jeziku je dostupna na e-adresi users@sr.openoffice.org. Posetite prethodnu stranicu da saznate o pretplati na listu i pretražite javno dostupnu arhivu.
За подршку унутар заједнице OpenOffice.org корисника у Србији посетите http://sr.openoffice.org/podrska.html . Дописна листа на српском језику је доступна на е-адреси users@sr.openoffice.org. Посетите претходну страницу да сазнате о претплати на листу и претражите јавно доступну архиву.
http://wiki.services.openoffice.org/wiki/Documentation/FAQ. ನಲ್ಲಿನ FAQ ವಿಭಾಗವನ್ನೂ ಸಹ ನೋಡಿ
OpenOffice.org ಜಾಲತಾಣವು IssueZilla ಅನ್ನು ಹೊಂದಿದ್ದು, ಇದು ದೋಷಗಳನ್ನು ಹಾಗು ಸಮಸ್ಯೆಗಳನ್ನು ವರದಿ ಮಾಡುವ ಒಂದು ವ್ಯವಸ್ಥೆಯಾಗಿದೆ. ಪ್ರತಿಯೊಬ್ಬ ಬಳಕೆದಾರರೂ ತಮ್ಮ ಪ್ಲಾಟ್ಫಾರ್ಮಿನಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ವರದಿ ಮಾಡಲು ಸ್ವಾಗತಿಸುತ್ತೇವೆ ಹಾಗು ಹಕ್ಕನ್ನು ಅವರುಗಳು ಹೊಂದಿರುತ್ತಾರೆ ಎಂದು ಖಚಿತಪಡಿಸುತ್ತೇವೆ. ಬಳಕೆದಾರ ಸಮುದಾಯದ ಈ ಬಗೆಯ ಸಮಸ್ಯೆಗಳ ಸಶಕ್ತ ವರದಿಯಿಂದಾಗಿ ಸೂಟ್ನ ಅಭಿವೃದ್ಧಿ ಕಾರ್ಯದಲ್ಲಿ ಮಹತ್ತರವಾದ ದೇಣಿಗೆ ನೀಡಿದಂತಾಗುತ್ತದೆ.
ಈ ಮುಕ್ತ ಆಕರ ಪರಿಯೋಜನೆಯಲ್ಲಿ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ OpenOffice.org ಸಮುದಾಯಕ್ಕೆ ಬಹಳ ಪ್ರಯೋಜನವಾಗುತ್ತದೆ.
ಸೂಟ್ನ ಬಳಕೆದಾರರಾದ ನೀವು ಈಗಾಗಲೆ ಅದರ ಅಬಿವೃದ್ಧಿ ಪ್ರಕ್ರಿಯೆಯ ಅಮೂಲ್ಯವಾದ ಭಾಗವಾಗಿದ್ದೀರಿ. ಇಷ್ಟೆ ಅಲ್ಲದೆ ನೀವು ಇನ್ನೂ ಸಹ ಸಮುದಾಯಕ್ಕೆ ದೀರ್ಘಾವಧಿ ದೇಣಿಗೆದಾರರಾಗಿ ಸಕ್ರಿಯ ಪಾತ್ರವನ್ನು ವಹಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಸೇರ್ಪಡೆಗೊಳ್ಳಲು ಹಾಗು ಬಳಕೆದಾರ ಪುಟವನ್ನು ನೋಡಲು http://www.openoffice.org ಗೆ ತೆರಳಿ:
ನಿಮ್ಮ ನೆರವನ್ನು ನೀಡಲು ಉತ್ತಮವಾದ ಮಾರ್ಗವೆಂದರೆ ಒಂದು ಅಥವ ಹೆಚ್ಚಿನ ಮೈಲಿಂಗ್ ಲಿಸ್ಟಿಗೆ ಚಂದಾದಾರರಾಗಿ, ಒಂದಿಷ್ಟು ಸಮಯ ಮರೆಯಲ್ಲಿ ನೋಡುತ್ತಿರಿ, ನಂತರ ನಿಧಾನವಾಗಿ OpenOffice.org ನ ಆಕರ ಸಂಜ್ಞೆಯು(ಸೋರ್ಸ್ ಕೋಡ್) ಬಿಡುಗಡೆಗೊಂಡ ಅಕ್ಟೋಬರ್ ೨೦೦೦ ರ ನಂತರ ಮೈಲ್ ಆರ್ಕೈವ್ಗಳನ್ನು ಓದಿಕೊಂಡು ಚರ್ಚಿಸಲಾದ ವಿಷಯಗಳನ್ನು ಮನನ ಮಾಡಿಕೊಳ್ಳಿ. ನಿಮಗೆ ಸೂಕ್ತವೆನಿಸಿದಾಗ, ನಿಮ್ಮ ಸ್ವ-ಪರಿಚಯದ ಒಂದು ಇ-ಮೈಲನ್ನು ಕಳುಹಿಸಿ ನಂತರ ಚರ್ಚೆಗಳಲ್ಲಿ ಭಾಗಿಯಾಗಿ. ನಿಮಗೆ ಈಗಾಗಲೆ ಮುಕ್ತ ಆಕರ ಪರಿಯೋಜನೆಗಳಲ್ಲಿ ಭಾಗಿಯಾದ ಅನುಭವವಿದ್ದಲ್ಲಿ http://development.openoffice.org/todo.html ನಲ್ಲಿರುವ ಮಾಡಬೇಕಿರುವ ಕೆಲಸಗಳ (To-Dos) ಪಟ್ಟಿಯನ್ನು ನೋಡಿ ಹಾಗು ಅದರಲ್ಲಿರುವ ಯಾವುದರಲ್ಲಾದರೂ ನೀವು ನೆರವಾಗಬಹುದೆ ಎಂದು ನಿರ್ಧರಿಸಿ
http://www.openoffice.org/mail_list.html ನಲ್ಲಿ ನೀವು ಚಂದಾದಾರರಾಗಬಹುದಾದ ಕೆಲವು ಪರಿಯೋಜನಾ ಮೈಲಿಂಗ್ ಲಿಸ್ಟನ್ನು ಇಲ್ಲಿ ನೀಡಲಾಗಿದೆ
ಸುದ್ದಿ: announce@openoffice.org *ಎಲ್ಲಾ ಬಳಕೆದಾರರಿಗೂ ಸಲಹೆ ಮಾಡಲಾಗುತ್ತದೆ* (ಕಡಿಮೆ ಟ್ರಾಫಿಕ್)
ಮುಖ್ಯ ಬಳಕೆದಾರ ಫೋರಮ್: user@openoffice.org *ಚರ್ಚೆಯಲ್ಲಿ ಭಾಗವಹಿಸಲು ಸುಲಭ ಮಾರ್ಗ* (ಅಧಿಕ ಟ್ರಾಫಿಕ್)
ಮಾರ್ಕೆಟಿಂಗ್ ಪರಿಯೋಜನೆ: dev@marketing.openoffice.org *ವಿಕಸನೆಯನ್ನೂ ಮೀರಿದ* (ದಟ್ಟಣೆಗೊಳ್ಳುತ್ತಿದೆ)
ಸಾಮಾನ್ಯ ಸಂಜ್ಞೆ(ಕೋಡ್) ಒದಗಿಸುವವರ ಲಿಸ್ಟ್: dev@openoffice.org (ಮಧ್ಯಮ/ದಟ್ಟಣೆ)
ನಿಮಗೆ ಅಷ್ಟೇನೂ ತಂತ್ರಾಂಶ ವಿನ್ಯಾಸ ಅಥವ ಸಂಜ್ಞೆಗಳ (ಕೋಡಿಂಗ್) ಅನುಭವ ಇಲ್ಲದೆ ಹೋದರೂ ಸಹ ನೀವು ಈ ಪ್ರಮುಖ ಮುಕ್ತ ಆಕರ ಪರಿಯೋಜನೆಗೆ ಮುಖ್ಯವಾದ ದೇಣಿಗೆಯನ್ನು ನೀಡಬಹುದು. ಹೌದು, ನೀವೆ!
http://projects.openoffice.org/index.html ನಲ್ಲಿ ಲೊಕಲೈಸೇಶನ್, ಪೋರ್ಟಿಂಗ್ ಹಾಗು ಗ್ರೂಪ್ವೇರಿನಂತಹ ಪರಿಯೋಜನೆಗಳಿಂದ ಹಿಡಿದು ಕೆಲವು ಪ್ರಮುಖ ಕೋಡಿಂಗ್ ಪರಿಯೋಜನೆಗಳನ್ನು ನೀವು ನೋಡಬಹುದು. ನೀವು ಒಬ್ಬ ವಿಕಸನಗಾರರಾಗಿರದೆ ಹೋದಲ್ಲಿ ಡಾಕ್ಯಮೆಂಟೇಶನ್ ಅಥವ ಮಾರ್ಕೆಟಿಂಗ್ ಪರಿಯೋಜನೆಯನ್ನು ನೋಡಿ. OpenOffice.org ಮಾರ್ಕೆಟಿಂಗ್ ಪರಿಯೋಜನೆಯಲ್ಲಿ ಮುಕ್ತ ಆಕರ ತಂತ್ರಾಂಶವನ್ನು ಮಾರ್ಕೆಟಿಂಗ್ ಮಾಡಲು ಗೆರಿಲ್ಲಾ ಮಾದರಿಯ ಹಾಗು ಸಾಂಪ್ರದಾಯಿಕ ವಾಣಿಜ್ಯ ತಂತ್ರಗಳನ್ನು ಬಳಸಲಾಗುತ್ತದೆ, ಹಾಗು ನಾವು ಇದನ್ನು ಭಾಷೆ ಹಾಗು ಸಂಸ್ಕೃತಿಯ ಮಿತಿಗಳನ್ನು ಮೀರಿ ಇದನ್ನು ನಿರ್ವಹಿಸುತ್ತಿದ್ದೇವೆ, ಆದ್ದರಿಂದ ನೀವು ಈ ಆಫಿಸ್ ಸೂಟ್ನ ಬಗೆಗೆ ಮಾಹಿತಿಯನ್ನು ಹರಡುವದರಿಂದ ಹಾಗು ನಿಮ್ಮ ಗೆಳೆಯರಿಗೆ ತಿಳಿಸುವುದರಿಂದ ಸಹಾಯ ಮಾಡಬಹುದಾಗಿದೆ.
http://marketing.openoffice.org/contacts.html ನಲ್ಲಿನ ಮಾರ್ಕೆಟಿಂಗ್ ಕಮ್ಯುನಿಕೇಶನ್ಸ್ ಹಾಗು ಇನ್ಫರ್ಮೇಶನ್ ನೆಟ್ವರ್ಕ್ ಅನ್ನು ಸೇರಿಕೊಳ್ಳುವುದರಿಂದ ನಮಗೆ ನೆರವಾಗಬಹುದು, ಈ ಮೂಲಕ ನಿಮ್ಮ ದೇಶದಲ್ಲಿನ ಹಾಗು ಸ್ಥಳೀಯ ಸಮುದಾಯದ ಪ್ರೆಸ್, ಮಾಧ್ಯಮ, ಸರ್ಕಾರಿ ಏಜನ್ಸಿಗಳು, ಕನ್ಸಲ್ಟಂಟ್ಗಳು, ಶಾಲೆಗಳು, ಲಿನಕ್ಸ್ ಬಳಕೆದಾರ ಸಮೂಹಗಳು ಹಾಗು ವಿಕಸನಗಾರರಿಗೆ ನಿರ್ದಿಷ್ಟ ಸಂಪರ್ಕ ಕೇಂದ್ರವನ್ನು ಒದಗಿಸಬಹುದು.
ನೀವು OpenOffice.org 3.3 ಅನ್ನು ಬಳಸಲು ಹರ್ಷಿಸುತ್ತೀರಿ ಹಾಗು ಆನ್ಲೈನಿನಲ್ಲಿ ನಮ್ಮೊಂದಿಗೆ ಸೇರಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.
OpenOffice.org ಸಮುದಾಯ
Portions Copyright 1998, 1999 James Clark. Portions Copyright 1996, 1998 Netscape Communications Corporation.